Page 2
ਗਾਵੈ ਕੋ ਵੇਖੈ ਹਾਦਰਾ ਹਦੂਰਿ ॥
ಗಾವೈ ಕೋ ವೇಖೈ ಹಾದ್ರಾ ಹದೂರಿ ||
ಕೆಲವರು ಅವರನ್ನು ತಮ್ಮ ದೇಹ ಮತ್ತು ಆತ್ಮ ದ ಒಂದು ಭಾಗವೆಂದು ತಿಳಿದುಕೊಂಡು ಅವರ ಮಹಿಮೆಯನ್ನು ಹಾಡುತ್ತಾರೆ.
ਕਥਨਾ ਕਥੀ ਨ ਆਵੈ ਤੋਟਿ ॥
ಕಥನಾ ಕಥೀ ನ ಆವೈ ತೋಟಿ ||
ಅನೇಕರು ಅವರ ಖ್ಯಾತಿಯ ಬಗ್ಗೆ ಮಾತನಾಡಿದ್ದಾರೆ ಆದರೆ ಇನ್ನೂ ಅಂತ್ಯವಾಗಿಲ್ಲ.
ਕਥਿ ਕਥਿ ਕਥੀ ਕੋਟੀ ਕੋਟਿ ਕੋਟਿ ॥
ಕಥಿ ಕಥಿ ಕಥಿ ಕೋಟಿ ಕೋಟಿ ಕೋಟಿ ॥
ಕೋಟಿಗಟ್ಟಲೆ ಜೀವಿಗಳು ಅವರಗುಣಗಳನ್ನು ವರ್ಣಿಸಿದರೂ ಅವರ ವಾಸ್ತವಿಕ ಸ್ವರೂಪವನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ.
ਦੇਦਾ ਦੇ ਲੈਦੇ ਥਕਿ ਪਾਹਿ ॥
ದೆದಾ ದೇ ಲೈದೆ ಥಕಿ ಪಾಹಿ ||
ಅಕಾಲ ಪುರುಷ ದಾತರಾಗಿ ಜೀವಿಗಳಿಗೆ ಭೌತಿಕ ವಸ್ತುಗಳನ್ನು (ದಣಿವರಿಯಿಲ್ಲದೆ) ನೀಡುತ್ತಾ ಹೋಗುತ್ತಾರೆ, (ಆದರೆ) ಜೀವಿ ಅದನ್ನು ತೆಗೆದುಕೊಳ್ಳಲು ಆಯಾಸಗೊಳ್ಳುತ್ತಾನೆ.
ਜੁਗਾ ਜੁਗੰਤਰਿ ਖਾਹੀ ਖਾਹਿ ॥
ಜುಗಾ ಜುಗಂತರಿ ಖಾಹಿ ಖಾಹಿ ||
ಎಲ್ಲಾ ಜೀವಿಗಳು ಯುಗಯುಗಾಂತರಗಳಿಂದ ಈ ಪದಾರ್ಥಗಳನ್ನು ಆನಂದಿಸುತ್ತಿವೆ.
ਹੁਕਮੀ ਹੁਕਮੁ ਚਲਾਏ ਰਾਹੁ ॥
ಹುಕಮಿ ಹುಕಮು ಚಲಾಯೆ ರಾಹು ||
ಆಜ್ಞಾಪಿಸುವ ನಿರಂಕಾರರ ಇಚ್ಛೆಯಿಂದಲೇ (ಇಡೀ ಸೃಷ್ಟಿಯ) ಮಾರ್ಗಗಳು ಚಲಿಸುತ್ತಿವೆ.
ਨਾਨਕ ਵਿਗਸੈ ਵੇਪਰਵਾਹੁ ॥੩॥
ನಾನಕ್ ವಿಗಸೈ ವೇಪರ್ವಾಹು || ೩ ||
ಶ್ರೀ ಗುರುನಾನಕ್ ದೇವ್ ಜಿ ಅವರು ಬ್ರಹ್ಮಾಂಡದ ಜೀವಿಗಳಿಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಆ ನಿರಂಕಾರ (ವಾಹೆಗುರು) ಯಾವಾಗಲೂ ಚಿಂತೆಯಿಲ್ಲದೆ (ಈ ಪ್ರಪಂಚದ ಜೀವಿಗಳ ಮೇಲೆ) ಸಂತೋಷವಾಗಿರುತ್ತಾರೆ ಎಂದು ಹೇಳುತ್ತಾರೆ. ॥ 3॥
ਸਾਚਾ ਸਾਹਿਬੁ ਸਾਚੁ ਨਾਇ ਭਾਖਿਆ ਭਾਉ ਅਪਾਰੁ ॥
ಸಾಚಾ ಸಾಹಿಬು ಸಾಚು ನಾಯಿ ಭಖಿಆ ಭಾವು ಅಪಾರು ||
ಆ ಅಕಾಲ ಪುರುಷ (ನಿರಂಕಾರ) ತನ್ನ ಸತ್ಯ ನಾಮದೊಂದಿಗೆ ಸ್ವತಃ ಸತ್ಯವೂ ಹೌದು, ಅವರನ್ನುಪ್ರೀತಿಸುವವರು (ಸತ್ಯ ಮತ್ತು ಸತ್ಯ ನಾಮದವರು) ಮಾತ್ರ ಅವರನ್ನುಅನಂತ ಎಂದು ಕರೆಯುತ್ತಾರೆ.
ਆਖਹਿ ਮੰਗਹਿ ਦੇਹਿ ਦੇਹਿ ਦਾਤਿ ਕਰੇ ਦਾਤਾਰੁ ॥
ಆಖಹಿ ಮಂಗಹಿ ದೇಹಿ ದೇಹಿ ದಾತಿ ಕರೇ ದಾತಾರು ॥
(ಎಲ್ಲಾ ದೇವತೆಗಳು, ರಾಕ್ಷಸರು, ಮನುಷ್ಯರು ಮತ್ತು ಪ್ರಾಣಿಗಳು ಇತ್ಯಾದಿ) ಜೀವಿಗಳು ಹೇಳುತ್ತಲೇ ಇರುತ್ತವೆ, ಕೇಳುತ್ತಲೇ ಇರುತ್ತವೆ, (ಭೌತಿಕ ವಸ್ತುಗಳು) ಕೊಡು ಕೊಡು ಅನ್ನುತ್ತವೆ, ಆ ದಾತರು (ದೇವರು) ಎಲ್ಲರಿಗೂ ನೀಡುತ್ತಲೇಇರುತ್ತಾರೆ.
ਫੇਰਿ ਕਿ ਅਗੈ ਰਖੀਐ ਜਿਤੁ ਦਿਸੈ ਦਰਬਾਰੁ ॥
ಫೇರಿ ಕಿ ಅಗೈ ರಖೀಐ ಜಿತು ದಿಸೈ ದರ್ಬಾರು ||
ಈಗ ಉದ್ಭವಿಸುವ ಪ್ರಶ್ನೆ ಏನೆಂದರೆ(ಇತರ ರಾಜರು ಮಹಾರಾಜರ ಮುಂದೆ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಹೋದಂತೆ) ಆ ಪರಿಪೂರ್ಣ ದೇವರ ಮುಂದೆ, ಅವರ ಬಾಗಿಲು ಸುಲಭವಾಗಿ ಕಾಣುವಂತೆ, ಯಾವ ಉಡುಗೊರೆಯನ್ನು ತೆಗೆದುಕೊಂಡು ಹೋಗಬೇಕು?
ਮੁਹੌ ਕਿ ਬੋਲਣੁ ਬੋਲੀਐ ਜਿਤੁ ਸੁਣਿ ਧਰੇ ਪਿਆਰੁ ॥
ಮುಹೌ ಕಿ ಬೋಲಣು ಬೋಲಿಏಯ್ ಜಿತು ಸುಣಿ ಘರೆ ಪಿಆರು ||
ಆ ಅನಂತ ಶಕ್ತಿಯು (ದೇವರು) ನಮಗೆ ಪ್ರೇಮ-ಪ್ರಸಾದ ನೀಡುವಂತೆ ಮಾಡಲು ನಾವು ಯಾವ ರೀತಿಯಲ್ಲಿ ನಮ್ಮ ನಾಲಗೆಯಿಂದ ಅವರ ಗುಣಗಾನವನ್ನು ಮಾಡಬೇಕು?
ਅੰਮ੍ਰਿਤ ਵੇਲਾ ਸਚੁ ਨਾਉ ਵਡਿਆਈ ਵੀਚਾਰੁ ॥
ಅಮೃತ್ ವೇಲಾ ಸಚು ನಾವು ವಡಿಅಯಿ ವೀಚಾರು ||
ಗುರು ಮಹಾರಾಜರು ಇವುಗಳಿಗೆ ಉತ್ತರವನ್ನು ಹೀಗೆ ಸ್ಪಷ್ಟಪಡಿಸುತ್ತಾರೆ, ಬೆಳಿಗ್ಗೆ (ಅಮೃತ ಘಳಿಗೆ) (ಒಬ್ಬ ವ್ಯಕ್ತಿಯ ಮನಸ್ಸು ಸಾಮಾನ್ಯವಾಗಿ ಲೌಕಿಕ ಜಟಿಲತೆಯಿಂದ ಬೇರ್ಪಟ್ಟ ಸಮಯದಲ್ಲಿ)ಆ ಸತ್ಯನಾಮವಿರುವ ಅಮರ ಪುರುಷನ ಹೆಸರನ್ನು ಜಪಿಸಬೇಕು ಮತ್ತು ಅವರ ಮಹಿಮೆಯನ್ನು ಹಾಡಬೇಕು, ಆಗ ಮಾತ್ರ ನೀವು ಅವರ ಪ್ರೀತಿಯನ್ನು ಪಡೆಯಬಲ್ಲಿರಿ.
ਕਰਮੀ ਆਵੈ ਕਪੜਾ ਨਦਰੀ ਮੋਖੁ ਦੁਆਰੁ ॥
ಕರ್ಮಿ ಆವೈ ಕಪ್ಡಾ ನದರಿ ಮೋಖು ದುಆರು ||
(ಇದರಿಂದ ಅವರು ಆಶೀರ್ವದಿಸಿದರೆ) ಆತ್ಮವು ಈ ದೇಹರೂಪದ ವಸ್ತ್ರವನ್ನು ಅಂದರೆ ಮಾನವ ಜನ್ಮವನ್ನು ಕೇವಲ ಕರ್ಮಗಳನ್ನು ಮಾಡುವುದರಿಂದ ಪಡೆಯುತ್ತದೆ, ಇದರಿಂದ ಮೋಕ್ಷ ದೊರೆಯುವುದಿಲ್ಲ, ಮೋಕ್ಷವನ್ನು ಪಡೆಯಲು ದಯೆಯ ದೃಷ್ಟಿ ಬೇಕು ಎಂದು ಗುರು ಜೀ ಹೇಳುತ್ತಾರೆ.
ਨਾਨਕ ਏਵੈ ਜਾਣੀਐ ਸਭੁ ਆਪੇ ਸਚਿਆਰੁ ॥੪॥
ನಾನಕ್ ಏವೈ ಜಾಣಿಎಯ್ ಸಭು ಆಪೆ ಸಚಿಆರು ||೪||
ಹೇ ನಾನಕ್! ಆ ಸತ್ಯಸ್ವರೂಪವಾದ ನಿರಂಕಾರರೇ ಸರ್ವಸ್ವ ಎಂಬ ತಿಳುವಳಿಕೆಯನ್ನು ಗ್ರಹಿಸಿಗೊಳ್ಳಿ, ಇದರಿಂದ ಮನುಷ್ಯನ ಎಲ್ಲಾ ಅನುಮಾನಗಳು ದೂರವಾಗುತ್ತವೆ. ॥ 4 ॥
ਥਾਪਿਆ ਨ ਜਾਇ ਕੀਤਾ ਨ ਹੋਇ ॥
ಥಾಪಿಯಾ ನ ಜೈ ಕೀತಾ ನ ಹೋಯಿ ॥
ಆ ದೇವರನ್ನು ಯಾರಿಂದಲೂ ಭೌತಿಕ ಮೂರ್ತಿ ರೂಪದಲ್ಲಿ ಸ್ಥಾಪಿಸಲು ಸಾಧ್ಯವಿಲ್ಲ. ಅದನ್ನು ಮಾಡಲೂ ಸಾಧ್ಯವಿಲ್ಲ.
ਆਪੇ ਆਪਿ ਨਿਰੰਜਨੁ ਸੋਇ ॥
ಆಪೇ ಆಪಿ ನಿರಂಜನು ಸೋಯಿ ||
ಅವರು ಮಾಯೆಗೆ ಮೀರಿ ಸ್ವಯಂ ಪ್ರಕಾಶಮಾನನಾಗಿದ್ದಾರೆ.
ਜਿਨਿ ਸੇਵਿਆ ਤਿਨਿ ਪਾਇਆ ਮਾਨੁ ॥
ಜಿನಿ ಸವಿಆ ತಿನಿ ಪಾಯಿಆ ಮಾನು ||
ಆ ದೇವರ ನಾಮಸ್ಮರಣೆ ಮಾಡಿದ ವ್ಯಕ್ತಿಯೇ ,ದೇವರ ಆಸ್ಥಾನದಲ್ಲಿ ಗೌರವವನ್ನು ಪಡೆಯುತ್ತಾರೆ.
ਨਾਨਕ ਗਾਵੀਐ ਗੁਣੀ ਨਿਧਾਨੁ ॥
ನಾನಕ್ ಗಾವೀಎಯ್ ಗುಣೀ ನಿಧಾನು ॥
ಆ ಗುಣಗಳ ಆಗರವಾದ ನಿರಂಕಾರರನ್ನು ಪೂಜಿಸಬೇಕೆಂದು ಶ್ರೀ ಗುರುನಾನಕ್ ದೇವ್ ಜಿ ಹೇಳುತ್ತಾರೆ.
ਗਾਵੀਐ ਸੁਣੀਐ ਮਨਿ ਰਖੀਐ ਭਾਉ ॥
ಗಾವಿಎಯ್ ಸುಣಿಎಯ್ ಮನಿ ರಖೀಎಯ್ ಭಾವು ||
ಅವರನ್ನುಸ್ತುತಿಸುವಾಗ, ಅವರಹೊಗಳಿಕೆಯನ್ನು ಕೇಳುವಾಗ, ನಿಮ್ಮ ಹೃದಯದಲ್ಲಿ ಅವರಬಗ್ಗೆ ಶ್ರದ್ಧೆಯನ್ನು ಹೊಂದಿರಿ.
ਦੁਖੁ ਪਰਹਰਿ ਸੁਖੁ ਘਰਿ ਲੈ ਜਾਇ ॥
ದುಖು ಪರಹರಿ ಸುಖು ಘರಿ ಲೈ ಜಾಯಿ ||
ಹೀಗೆ ಮಾಡುವುದರಿಂದ ದುಃಖಗಳು ನಾಶವಾಗಿ ಮನೆಯಲ್ಲಿ ಸುಖ ನೆಲೆಸುತ್ತದೆ.
ਗੁਰਮੁਖਿ ਨਾਦੰ ਗੁਰਮੁਖਿ ਵੇਦੰ ਗੁਰਮੁਖਿ ਰਹਿਆ ਸਮਾਈ ॥
ಗುರುಮುಖೀ ನಾದಂ ಗುರುಮುಖೀ ವೇದಂ ಗುರುಮುಖೀ ರಹಿಯಾ ಸಮಾಯಿ॥
ಗುರುವಿನ ಬಾಯಿಂದ ಹೊರಡುವ ಶಬ್ದಗಳೇ ವೇದಗಳ ಜ್ಞಾನವಾಗಿದೆ, ಅದೇ ಜ್ಞಾನ ಉಪದೇಶದ ರೂಪದಲ್ಲಿ ಎಲ್ಲೆಲ್ಲೂ ನೆಲೆಸಿದೆ.
ਗੁਰੁ ਈਸਰੁ ਗੁਰੁ ਗੋਰਖੁ ਬਰਮਾ ਗੁਰੁ ਪਾਰਬਤੀ ਮਾਈ ॥
ಗುರು ಇಸರು ಗುರು ಗೋರಖು ಬರ್ಮ ಗುರು ಪಾರ್ಬತಿ ಮಾಯಿ ||
ಗುರುವೇ ಶಿವ, ವಿಷ್ಣು, ಬ್ರಹ್ಮ ಮತ್ತು ತಾಯಿ ಪಾರ್ವತಿಯಾಗಿದ್ದಾರೆ, ಏಕೆಂದರೆ ಗುರುವು ಪರಮ ಶಕ್ತಿ.
ਜੇ ਹਉ ਜਾਣਾ ਆਖਾ ਨਾਹੀ ਕਹਣਾ ਕਥਨੁ ਨ ਜਾਈ ॥
ಜೆ ಹಉ ಜಾಣಾ ಆಖಾ ನಾಹಿ ಕಹಣಾ ಕಥನು ನ ಜಾಯಿ ||
ಶ್ರೀ ಗುರುನಾನಕ್ ದೇವ್ ಜಿ ಅವರು ಹೇಳುತ್ತಾರೆ, ಪರಮಪಿತ ಪರಮಾತ್ಮನನ್ನು ಅವರ ಭಾಷಣದಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ ಏಕೆಂದರೆ ಅವರ ಮಹಿಮೆ ಅಪರಿಮಿತವಾಗಿದೆ, ಅದನ್ನು ನಮ್ಮ ಸೂಕ್ಷ್ಮ ಬುದ್ಧಿಯಿಂದ ವಿವರಿಸಲಾಗುವುದಿಲ್ಲ.
ਗੁਰਾ ਇਕ ਦੇਹਿ ਬੁਝਾਈ ॥
ಗುರಾ ಇಕ್ ದೇಹಿ ಬುಝಾಈ ॥
ಓ ನಿಜವಾದ ಗುರುವೇ! ನನಗೆ ಕೇವಲ ಇಷ್ಟನ್ನು ತಿಳಿಹೇಳಿ
ਸਭਨਾ ਜੀਆ ਕਾ ਇਕੁ ਦਾਤਾ ਸੋ ਮੈ ਵਿਸਰਿ ਨ ਜਾਈ ॥੫॥
ಸಭನಾ ಜೀಆ ಕಾ ಇಕು ದಾತಾ ಸೋ ಮೈ ವಿಸರಿ ನ ಜಾಯಿ || ೫॥
ಸಕಲ ಜೀವರಾಶಿಗಳಏಕೈಕ ದಾತನಾಗಿರುವ ಅವರನ್ನು ನಾನು ಎಂದಿಗೂ ಮರೆಯದಿರುವಂತೆ ಆಗಲಿ॥5॥
ਤੀਰਥਿ ਨਾਵਾ ਜੇ ਤਿਸੁ ਭਾਵਾ ਵਿਣੁ ਭਾਣੇ ਕਿ ਨਾਇ ਕਰੀ ॥
ತೀರಥಿ ನಾವಾ ಜೆ ತಿಸು ಭಾವಾ ವಿಣು ಭಾಣೆ ಕಿ ನಾಯಿ ಕರೀ ||
ತೀರ್ಥಸ್ನಾನವೂ ಅವರಿಗೆ ಸಮ್ಮತವಾದರೆ ಮಾತ್ರವಷ್ಟೇ ನಾನು ಮಾಡಲು ಸಾಧ್ಯ, ಆ ಅಕಾಲ ಪುರುಷರ ಆಕ್ಷೇಪವಿದ್ದರೆ ತೀರ್ಥಸ್ನಾನವನ್ನು ಮಾಡಿ ನಾನೇನು ಮಾಡಬೇಕು, ಏಕೆಂದರೆ ಆಗ ಅದೆಲ್ಲವೂ ಅರ್ಥಹೀನವಾಗುತ್ತದೆ.
ਜੇਤੀ ਸਿਰਠਿ ਉਪਾਈ ਵੇਖਾ ਵਿਣੁ ਕਰਮਾ ਕਿ ਮਿਲੈ ਲਈ ॥
ಜೇತಿ ಸಿರಟ್ಹಿ ಉಪಾಯಿ ವೇಖ ವಿಣು ಕರ್ಮಾ ಕಿ ಮಿಲೈ ಲಾಯಿ ||
ಆ ಸೃಷ್ಟಿಕರ್ತರು ಸೃಷ್ಟಿಸಿದ ಎಲ್ಲಾ ಸೃಷ್ಟಿಗಳಲ್ಲಿ, ನಾನು ನೋಡಿರುವಂತೆ ಕರ್ಮವಿಲ್ಲದೆ ಯಾವುದೇ ಜೀವವು ಏನನ್ನೂ ಪಡೆಯುವುದಿಲ್ಲ ಹಾಗೂ ಅದಕ್ಕೆ ಏನು ದೊರೆಯುವುದೂ ಇಲ್ಲ.
ਮਤਿ ਵਿਚਿ ਰਤਨ ਜਵਾਹਰ ਮਾਣਿਕ ਜੇ ਇਕ ਗੁਰ ਕੀ ਸਿਖ ਸੁਣੀ ॥
ಮತಿ ವಿಚಿ ರತನ್ ಜವಾಹರ್ ಮಾಣಿಕ್ ಜೆ ಇಕ್ ಗುರ್ ಕೀ ಸಿಖ್ ಸುಣೀ ||
ಗುರುವಿನಿಂದ ಪಡೆದ ಜ್ಞಾನವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ, ನಮ್ಮ ಬುದ್ಧಿಯು ವಜ್ರ ಮತ್ತು ಆಭರಣಗಳಂತಹ ವಸ್ತುಗಳಿಂದ ತುಂಬಿರುತ್ತದೆ ಮತ್ತು ನಮ್ಮ ಜೀವನವು ವಜ್ರ ಮತ್ತು ಮಾಣಿಕ್ಯಗಳಂತಹ ಅಮೂಲ್ಯ ವಸ್ತುಗಳಂತೆ ಸುಂದರವಾಗಿರುತ್ತದೆ.
ਗੁਰਾ ਇਕ ਦੇਹਿ ਬੁਝਾਈ ॥
ಗುರಾ ಇಕ್ ದೇಹಿ ಬುಝಾಈ ॥
ಹೇ ಗುರೂಜಿ! ನನಗೆ ಕೇವಲ ಇಷ್ಟನ್ನು ತಿಳಿಸಿ
ਸਭਨਾ ਜੀਆ ਕਾ ਇਕੁ ਦਾਤਾ ਸੋ ਮੈ ਵਿਸਰਿ ਨ ਜਾਈ ॥੬॥
ಸಭನಾ ಜೀಆ ಕಾ ಇಕು ದಾತಾ ಸೊ ಮೈ ವಿಸರಿ ನ ಜಾಈ ||೬||
ಸಮಸ್ತ ಜೀವಿಗಳಿಗೆ ಕೊಡುವ ನಿರಂಕಾರರುನನ್ನಿಂದ ಮರೆಯದಿರಲಿ.॥6॥
ਜੇ ਜੁਗ ਚਾਰੇ ਆਰਜਾ ਹੋਰ ਦਸੂਣੀ ਹੋਇ ॥
ಜೆ ಜಗು ಚಾರೆ ಆರ್ಜಾ ಹೋರ್ ದಸೂಣಿ ಹೋಯಿ ||
ಯೋಗಾಭ್ಯಾಸದಿಂದ ಒಬ್ಬ ಮನುಷ್ಯ ಅಥವಾ ಯೋಗಿಯು ನಾಲ್ಕು
ਨਵਾ ਖੰਡਾ ਵਿਚਿ ਜਾਣੀਐ ਨਾਲਿ ਚਲੈ ਸਭੁ ਕੋਇ ॥
ನವ ಖಂಡಾ ವಿಚಿ ಜಾಣಿಯೇ ನಾಲಿ ಚಲೈ ಸಭು ಕೊಈ ||
ಯುಗಗಳಿಗಿಂತ ಹತ್ತು ಪಟ್ಟು ಹೆಚ್ಚು ವಯಸ್ಸನ್ನು ಪಡೆಯುತ್ತಾನೆ, ಅಂದರೆ ನಲವತ್ತು ಯುಗದ ವಯಸ್ಸು ಇರಬೇಕು.
ਚੰਗਾ ਨਾਉ ਰਖਾਇ ਕੈ ਜਸੁ ਕੀਰਤਿ ਜਗਿ ਲੇਇ ॥
ಚಂಗಾ ನಾಉ ರಖಾಯಿ ಕೈ ಜಸು ಕೀರ್ತಿ ಜಗಿ ಲೈ ||
ಅವರು ನವಖಂಡಗಳಲ್ಲಿ (ಪುರಾಣ ಗ್ರಂಥಗಳಲ್ಲಿ ವಿವರಿಸಲಾದ ಇಲಾವರ್ತ, ಕಿಂಪುರುಷ, ಭದ್ರ, ಭರತ, ಕೇತುಮಲ್, ಹರಿ, ಹಿರಣ್ಯ, ರಮ್ಯಕ ಮತ್ತು ಕುರು) ವೈಭವೀಕರಿಸಲ್ಪಡಲಿ, ಅವರ ಗೌರವಾರ್ಥವಾಗಿ ಎಲ್ಲರೂ ಒಟ್ಟಾಗಿ ನಡೆಯಲಿ.
ਜੇ ਤਿਸੁ ਨਦਰਿ ਨ ਆਵਈ ਤ ਵਾਤ ਨ ਪੁਛੈ ਕੇ ॥
ಜೆ ತಿಸು ನದರಿ ನ ಆವೈ ತ ವಾತ್ ನ ಪೂಛೈ ಕೆ ||
ವಿಶ್ವದ ಪ್ರಸಿದ್ಧ ವ್ಯಕ್ತಿಯಾಗುವ ಮೂಲಕ, ಅವರು ತಮ್ಮ ವೈಭವವನ್ನು ಹಾಡಿಸುತ್ತಲೇ ಇರಲಿ.
ਕੀਟਾ ਅੰਦਰਿ ਕੀਟੁ ਕਰਿ ਦੋਸੀ ਦੋਸੁ ਧਰੇ ॥
ಕೀಟಾ ಅಂದರಿ ಕೀಟು ಕರಿ ದೋಸಿ ದೋಸು ಘರೆ ||
ಆ ಮನುಷ್ಯನು ಅಕಾಲ ಪುರುಷರ ಕೃಪೆಗೆ ಪಾತ್ರನಾಗದಿದ್ದರೆ, ಅವನ ಯೋಗಕ್ಷೇಮವನ್ನು ಯಾರೂ ಕೇಳುವುದಿಲ್ಲ.
ਨਾਨਕ ਨਿਰਗੁਣਿ ਗੁਣੁ ਕਰੇ ਗੁਣਵੰਤਿਆ ਗੁਣੁ ਦੇ ॥
ನಾನಕ್ ನಿರ್ಗುಣಿ ಗುಣು ಕರೆ ಗುಣವಂತಿಆ ಗುಣು ದೇ ||
ಇಷ್ಟು ಮಹಿಮೆ ಮತ್ತು ಗೌರವವನ್ನು ಹೊಂದಿದ್ದರೂ ಸಹ, ಅಂತಹ ವ್ಯಕ್ತಿಯನ್ನು ದೇವರ ಮುಂದೆ ಸಣ್ಣ ಕೀಟ ಎಂದು ಪರಿಗಣಿಸಲಾಗುತ್ತದೆ, ಅಂದರೆ, ಅತ್ಯಂತ ಕೀಳು, ದೋಷಗಳಿರುವ ಜನರು ಸಹ ಅವರನ್ನು ಅಪರಾಧಿ ಎಂದು ಪರಿಗಣಿಸುತ್ತಾರೆ.
ਤੇਹਾ ਕੋਇ ਨ ਸੁਝਈ ਜਿ ਤਿਸੁ ਗੁਣੁ ਕੋਇ ਕਰੇ ॥੭॥
ತೇಹ ಕೋಯಿ ನ ಸುಝಯಿ ಜಿ ತಿಸು ಗುಣು ಕೋಯಿ ಕರೇ ||೭||
ಆ ಅಪರಿಮಿತ ಶಕ್ತಿಯುಳ್ಳ ನಿರಂಕಾರರು ಅಯೋಗ್ಯ ಮನುಷ್ಯರಿಗೆ ಗುಣಗಳನ್ನು ನೀಡಿ ಸದ್ಗುಣಿಗಳನ್ನು ಅಧಿಕ ಪುಣ್ಯವಂತರನ್ನಾಗಿ ಮಾಡುತ್ತಾರೆ ಎಂಬುದು ಗುರುನಾನಕ್ ಜಿಯವರ ಹೇಳಿಕೆ.
ਸੁਣਿਐ ਸਿਧ ਪੀਰ ਸੁਰਿ ਨਾਥ ॥
ಸುಣಿಯೈ ಸಿದ್ಧ ಪೀರ್ ಸುರಿ ನಾಥ್ ॥
ಆದರೆ ಆ ಗುಣಗಳಿಂದ ಕೂಡಿದ ಭಗವಂತನಿಗೆ ಯಾವ ಗುಣವನ್ನೂ ನೀಡಬಲ್ಲಂತವರು ಎಲ್ಲೂ ಕಾಣಸಿಗುವುದಿಲ್ಲ.
ਸੁਣਿਐ ਧਰਤਿ ਧਵਲ ਆਕਾਸ ॥
ಸುಣಿಯೈ ಧರತಿ ಧವಲ್ ಆಕಾಶ್ ॥
ಸಿದ್ಧ, ಪೀರ್, ದೇವ್ ಮತ್ತು ನಾಥ ಮೊದಲಾದವರು ದೇವರ ನಾಮವನ್ನು ಕೇಳುವುದರಿಂದ, ಅಂದರೆ ಅವರ ಹೃದಯವನ್ನು ಅವರ ಮಹಿಮೆಯಲ್ಲಿ ಇರಿಸುವುದರಿಂದಲೇ, ಪರಮೋಚ್ಚ ಸ್ಥಾನವನ್ನು ಪಡೆದಿದ್ದಾರೆ.
ਸੁਣਿਐ ਦੀਪ ਲੋਅ ਪਾਤਾਲ ॥
ಸುಣಿಯೈ ದೀಪ್ ಲೊಅ ಪಾತಾಲ್ ||
ಈ ಹೆಸರನ್ನು ಕೇಳುತ್ತಲೇ ಭೂಮಿ, ಅದನ್ನು ಹಿಡಿದಿರುವ ವೃಷಭ (ಪೌರಾಣಿಕ ಗ್ರಂಥಗಳ ಪ್ರಕಾರ, ಈ ಭೂಮಿಯನ್ನು ತನ್ನ ಕೊಂಬಿನ ಮೇಲೆ ಇಟ್ಟುಕೊಂಡಿರುವ ಧೌಲಾ ಗೂಳಿ) ಮತ್ತು ಆಕಾಶದ ಸ್ಥಿರತೆಯ ಶಕ್ತಿಯ ಜ್ಞಾನವು ಬರುತ್ತದೆ.
ਸੁਣਿਐ ਪੋਹਿ ਨ ਸਕੈ ਕਾਲੁ ॥
ಸುಣಿಯೈ ಪೋಹಿ ನ ಸಕೈ ಕಾಲು ||
ನಾಮವನ್ನು ಕೇಳುವುದರಿಂದ ಶಾಲ್ಮಲಿ, ಕ್ರೌಂಚ, ಜಂಬೂ, ಪಾಲಕ ಮೊದಲಾದ ಏಳು ದ್ವೀಪಗಳೂ ಭೂಃ, ಭವಃ, ಸ್ವಾಃ ಮೊದಲಾದ ಹದಿನಾಲ್ಕು ಲೋಕಗಳೂ ಅತಲ, ವೈತಲ, ಸುತಲ ಮೊದಲಾದ ಏಳು ಪಾತಾಳಗಳ ವ್ಯಾಪಕತೆ ಪ್ರಾಪ್ತವಾಗುತ್ತದೆ.
ਨਾਨਕ ਭਗਤਾ ਸਦਾ ਵਿਗਾਸੁ ॥
ನಾನಕ್ ಭಾಗ್ತಾ ಸದಾ ವಿಗಾಸು ||
ಹೆಸರು ಕೇಳಿದವನನ್ನು ಸಾವು ಕೂಡ ಮುಟ್ಟಲಾರದು.
ਸੁਣਿਐ ਦੂਖ ਪਾਪ ਕਾ ਨਾਸੁ ॥੮॥
ಸುಣಿಯೈ ದುಖ ಪಾಪ್ ಕಾ ನಾಸು ॥8॥
ಹೇ ನಾನಕ್! ಭಗವಂತನ ಭಕ್ತನಲ್ಲಿ ಯಾವಾಗಲೂ ಆನಂದದ ಬೆಳಕು ಇರುತ್ತದೆ,
ਸੁਣਿਐ ਈਸਰੁ ਬਰਮਾ ਇੰਦੁ ॥
ಸುಣಿಯೈ ಇಸರು ಬರ್ಮಾ ಇಂದು ||
ದೇವರ ನಾಮವನ್ನು ಕೇಳುವುದರಿಂದ ಎಲ್ಲಾ ದುಃಖಗಳು ಮತ್ತು ದುಷ್ಕೃತ್ಯಗಳು ನಾಶವಾಗುತ್ತವೆ. , ॥8॥
ਸੁਣਿਐ ਮੁਖਿ ਸਾਲਾਹਣ ਮੰਦੁ ॥
ಸುಣಿಯೇ ಮುಖಿ ಸಾಲಾಹಣ್ ಮಂದು ||
ಪರಮಾತ್ಮನ ಹೆಸರನ್ನು ಕೇಳುವುದರಿಂದಲೇ ಶಿವ, ಬ್ರಹ್ಮ ಮತ್ತು ಇಂದ್ರ ಮೊದಲಾದವರು ಉನ್ನತ ಸ್ಥಾನಮಾನವನ್ನು ಪಡೆದಿದ್ದಾರೆ.
ਸੁਣਿਐ ਜੋਗ ਜੁਗਤਿ ਤਨਿ ਭੇਦ ॥
ಸುಣಿಯೇ ಜೋಗ್ ಜುಗತಿ ತನಿ ಭೇದ್ ||
ದಡ್ಡರು, ಅಂದರೆ ಕೆಟ್ಟ ಕೆಲಸ ಮಾಡುವವರೂ ಹೆಸರು ಕೇಳಿದ ಮಾತ್ರಕ್ಕೆ ಪ್ರಶಂಸೆಗೆ ಪಾತ್ರರಾಗುತ್ತಾರೆ.
ਸੁਣਿਐ ਸਾਸਤ ਸਿਮ੍ਰਿਤਿ ਵੇਦ ॥
ಸುಣಿಯೇ ಸಾಸತ್ ಸಿಮೃತಿ ವೇದ್ ॥
ಹೆಸರಿನೊಂದಿಗೆ ಸಂಯೋಜಿಸುವುದರಿಂದ, ಯೋಗಾದಿ ಮತ್ತು ದೇಹದ ಶುದ್ಧ, ಮಣಿಪೂರಕ, ಮೂಲಾಧಾರ ಇತ್ಯಾದಿ ಷಟ್ಚಕ್ರಗಳ ರಹಸ್ಯವನ್ನು ಅರಿತುಕೊಳ್ಳಲಾಗುತ್ತದೆ.
ਨਾਨਕ ਭਗਤਾ ਸਦਾ ਵਿਗਾਸੁ ॥
ನಾನಕ್ ಭಾಗ್ತಾ ಸದಾ ವಿಗಾಸು ||
ನಾಮವನ್ನು ಕೇಳುವುದರಿಂದ ಷಟ್-ಶಾಸ್ತ್ರಗಳು, (ಸಾಂಖ್ಯ, ಯೋಗ, ನ್ಯಾಯ ಇತ್ಯಾದಿ), ಇಪ್ಪತ್ತೇಳು ಸ್ಮೃತಿಗಳು (ಮನು, ಯಾಜ್ಞವಲ್ಕ್ಯ ಸ್ಮೃತಿ ಇತ್ಯಾದಿ) ಮತ್ತು ನಾಲ್ಕು ವೇದಗಳ ಜ್ಞಾನವು ಲಭ್ಯವಾಗುತ್ತದೆ.